
23rd February 2025
ಬೀದರ್: ಬೀದರ್ನ ಪ್ರತಿಷ್ಟಿತ ಮನೆತನವಾದ ನಾಗಮಾರಪಳ್ಳಿ ಕುಟುಂಬದ ಮುತ್ಸದ್ದಿ ನಾಯಕರಾದ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ಹಾಲಿ ನಿರ್ದೇಶಕರಾದ ಉಮಾಕಾಂತ ನಾಗಮಾರಪಳ್ಳಿ ಅವರ ಮೇಲೆ ಎಫ್.ಐ.ಆರ್ ದಾಖಲಿಸಲು ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಅಮರ ಖಂಡ್ರೆ ಅವರು ಪ್ರಚೋದನೆ ನೀಡಿ ಕ್ಷÄಲ್ಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಡಿ.ಕೆ ಸಿದ್ರಾಮ ಆರೋಪಿಸಿದರು.
ರವಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಇತ್ತಿಚೀಗೆ ಔರಾದ್ ಪಟ್ಟಣದಲ್ಲಿ ತಾಲೂಕು ವಕ್ಕಲುತನ ಹುಟ್ಟುವಳಿ ಒಕ್ಕೂಟದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯಾದ ಬಸವರಾಜ ಹೆಬ್ಬಾಳೆ ಅವರ ನಾಮಪತ್ರ ತಿರಸ್ಕೃತಗೊಳಿಸಲು ಡಿ.ಸಿ.ಸಿ ಬ್ಯಾಂಕ್ನ ಅಧ್ಯಕ್ಷರು ಹುನ್ನಾರ ನಡೆಸಿದಾಗ ಸ್ಥಳದಲ್ಲಿದ್ದ ಉಮಾಕಾಂತ ನಾಗಮಾರಪಳ್ಳಿ ಅವರು ಕಾರಣ ಕೇಳಲಾಗಿ ಉಮಾಕಾಂತ ನಾಗಮಾರಪಳ್ಳಿ ಅವರು ಕುತ್ತಿಗೆ ಹಿಡಿದು ತನ್ನನ್ನು ದೂಡಿದ್ದಾರೆ ಎಂದು ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರ ಆಪ್ತ ಸಹಾಯಕ ರಮೇಶ ಚಿದ್ರಿ ಹಾಗೂ ಬ್ಯಾಂಕ್ ಸಿಬ್ಬಂದಿ ಚಂದ್ರಕಾAತ ಸೆಡೊಳೆ ಸುಳ್ಳು ದೂರು ದಾಖಲಿಸಿ ರಾಜಕೀಯ ಪ್ರಭಾವ ಬೆಳೆಸಿ ಲೋಕಸಭೆ ಚುನಾವಣೆಯಲ್ಲಿ ಉಮಾಕಾಂತ ಅವರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ ಎಂಬ ಕಾರಣಕ್ಕೆ ಅವರ ಮೇಲೆ ಎಫ್.ಐ.ಆರ್ ದಾಖಲಿಸಿ ಚಿಲ್ಲರೆ ರಾಜಕೀಯಕ್ಕೆ ಅಮರ ಖಂಡ್ರೆ ಇಳಿದಿದ್ದಾರೆ ಎಂದು ದೂರಿದರು.
ರಮೇಶ ಚಿದ್ರಿ ಮೂಲತಃ ಮಹಾತ್ಮಾ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ. ಹಾಗೇ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರ ಆಪ್ತ ಸಹಾಯಕ. ಆದರೆ ಇವರ ಕೆಲಸ ಔರಾದ್ನಲ್ಲೇಕೆ? ಆ ಚುನಾವಣೆಗೂ ಇವರಿಗೂ ಯಾವುದೇ ಸಂಬAಧ ಇಲ್ಲ. ನಿಮಗೆ ನೈತಿಕತೆ ಇದ್ದರೆ ಕೂಡಲೇ ಚಂದ್ರಕಾAತ ಶೆಡೊಳೆ ಹಾಗೂ ರಮೇಶ ಚಿದ್ರಿ ಅವರನ್ನು ಅಮರ ಖಂಡ್ರೆ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
undefined
ಸರ್ಕಾರದ ಯೋಜನೆಗಳ ಯಶಸ್ಸಿಗೆ ಪ್ರಾಮಾಣಿಕತೆ ಅತ್ಯವಶ್ಯ. ಮುಸಲ್ಮಾರಿ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ.
ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ. ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.
ಪ.ಜಾತಿ,ಪಂಗಡದ ಅಭಿವೃದ್ಧಿಗೆ ಇಟ್ಟ ಹಣ ದರ್ಬಳಿಕೆ ಖಂಡಿಸಿ ಮಾ.೪ ರಂದು ಬಿಜೆಪಿ ಪ್ರತಿಭಟನೆ